ಇದೊಂದು ಜೋಕ್.....ಕಾಲೇಜಿನ ದಿನಗಳಲ್ಲಿ ನಮ್ಮ ಮ್ಯಾಥ್ಸ್ ಲೆಕ್ಚರರ್ ಹೇಳುತಿದ್ದ ಜೋಕ್....
ಒಬ್ಬ ಸೈಂಟಿಸ್ಟ್ ಬಳಿ ಒಂದು ಕಪ್ಪೆ ಇತ್ತಂತೆ. ಅದು ಅವನು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿತ್ತು. ಒಂದು ಸಲ ಸೈಂಟಿಸ್ಟ ಇದೇ ಕಪ್ಪೆ ಮೇಲೇ ಪ್ರಯೋಗ ನಡೆಸಲು ಮುಂದಾದ. ಕಪ್ಪೆಯ ಒಂದು ಕಾಲು ಕಟ್ ಮಾಡಿ ಹಾರು ಎಂದ. ಕಪ್ಪೆ ಹಾರಿತು. ಎರಡನೇ ಕಾಲು ಕಟ್ ಮಾಡಿ ಹಾರು ಎಂದಾಗ ಕಷ್ಟ ಪಟ್ಟು ಹಾರಿತು. ಮೂರನೇ ಕಾಲು ಕಟ್ ಮಾಡಿ ಹಾರು ಎಂದಾಗ ತನ್ನೆಲ್ಲಾ ಶಕ್ತಿ ಬಳಸಿ ಹಾರಿತು. ಕೊನೆಗೆ ನಾಲ್ಕನೇ ಕಾಲೂ ಕಟ್ ಮಾಡಿ ಹಾರು ಎಂದಾಗ ಮಾತ್ರ ಅದಕ್ಕೆ ಹಾರೋಕೆ ಸಾಧ್ಯವಾಗಲಿಲ್ಲ. ಆಗ ಸೈಂಟಿಸ್ಟ್ ತನ್ನ ನೋಟ್ ಬಕ್
ನಲ್ಲಿ ಬರೆದು ಕೊಂಡ....
.....ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ....
ಕಾಲೇಜಿನ ಆ ದಿನಗಳಲ್ಲಿ ನನಗೆ ಬಹಳ ಇಷ್ಟವಾದ ಜೋಕ್ ಇದು. ನೀವೂ ಕೇಳಿರ್ತೀರಾ...ಮೊನ್ನೆ ಸುಮ್ನೆ ನಡೆದು ಹೋಗ್ತಾ ಇದ್ದಾಗ,ಈ ಜೋಕ್ ಮೆಲುಕು ಹಾಕ್ತಾ ಇದ್ದೆ. ಜೀವನದ ಸತ್ಯ ಹೇಳುತ್ತಿದೆ ಅನಿಸಿತು.ಇತ್ತೀಚೆಗೆ ದಿನಾ ತಡರಾತ್ರಿ ಬರುತ್ತಿರುವ ಗಂಡನ ಕಿಸೆಯಲ್ಲಿ ದೊರೆತ ತರುಣಿಯ ಫೋಟೋ, ಪ್ರತಿದಿನ ಮನೆಯಿಂದ ಹೊರಗೆ ಕಾಲಿಟ್ಟಾಗಲೇ ತನ್ನ ಮನೆ ಗೇಟು ತೆರೆದು ನಿಲ್ಲುವ ಕನ್ನಡಕದ ಹುಡುಗ, ಮನೆಯಲ್ಲಿ ಕಳ್ಳತನವಾದ ದಿನದಿಂದಲೇ ಹೇಳದ ಕೇಳದೆ ಕೆಲಸಕ್ಕೆ ಚಕ್ಕರ್ ಕೊಟ್ಟ ಕೆಲಸದಾಕೆ, ಇವರೆಲ್ಲಾ ಒಂದೊಂದು ಕಥೆ ಹೇಳುತ್ತಾರೆ. ಒಂದಕ್ಕೂ ಮತ್ತೊಂದಕ್ಕೂ ಯಾವುದೋ ರೀತಿ ತಾಳೆಯಾಗುತ್ತೆ. ಲೆಕ್ಕಾಚಾರ ಸರಿ ಹೋಗುತ್ತೆ. ಅದೇ ನಿಜ ಅನ್ನಿಸುತ್ತೆ. 3+4 ಕೂಡ 7, 5+2 ಕೂಡ 7 ಎಂಬುದು ಮರೆತು ಹೋಗುತ್ತೆ. ಈ ತಪ್ಪು ವಿಶ್ಲೇಷಣೆಗಳು ಬದುಕಿನ ಹಾದಿಯನ್ನೇ ತಪ್ಪಿಸಿದ್ದನ್ನು ಕಂಡಿದ್ದೀನಿ. ಕಪ್ಪೆಗೆ ನಾಲ್ಕೂ ಕಾಲು ಕಟ್ ಮಾಡಿದಾಗ ಅದು ಹಾರದಿರುವುದಕ್ಕೆ ಕಿವಿ ಕೇಳದಿರುವುದು ಕಾರಣವಲ್ಲ, ಕಾಲಿಲ್ಲದಿರುವುದು ಕಾರಣ ಎಂದು ಅರಿವಾಗುವುದರೊಳಗೆ ಬದುಕು ಹಾದಿ ತಪ್ಪಿರೊತ್ತೆ. ಅಲ್ವಾ.........